ಕನ್ನಡ ಸಾಹಿತ್ಯ ಪರಿಷತ್ತು


ಕನ್ನಡ ಸಾಹಿತ್ಯ ಪರಿಷತ್ತು  
ಕನ್ನಡ ಭಾಷೆಸಾಹಿತ್ಯಕಲೆಜನಪದ, ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಮಹದಾಶಯದೊಂದಿಗೆ  ದಿನಾಂಕ ೫-೫-೧೯೧೫ರಲ್ಲಿ ಸ್ಥಾಪನೆಯಾದ ಕನ್ನಡಿಗರ ಸಾಂಸ್ಕೃತಿಕ ಮೇರು ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ತು.
ಕರ್ಣಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ, ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತ ಎಂದು 1914ರಲ್ಲಿ ಅಂದಿನ ಮೈಸೂರು ಸಂಸ್ಥಾನದ ಸಂಪದಭ್ಯುದಯ ಸಮಾಜ  ತನ್ನ ವಾರ್ಷಿಕ ಅಧಿವೇಶನದಲ್ಲಿ ಕೈಗೊಂಡ ಮಹತ್ವದ ನಿರ್ಧಾರ ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಕಾರಣವಾಯ್ತು. ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು.  ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ಕರ್ಣಾಟಕ ಸಾಹಿತ್ಯ ಪರಿಷತ್ತೇ ಇಂದು ಕನ್ನಡ ಸಾಹಿತ್ಯ ಪರಿಷತ್ತು.ಆಗಿ ಹೆಮ್ಮರವಾಗಿ ಬೆಳೆದಿದೆ. ರಾಜ್ಯಾದ್ಯಂತ ಅಷ್ಟೇಕೆ ಹೊರನಾಡಿನಲ್ಲೂ ತನ್ನ ಬಿಳಿಲುಗಳನ್ನು ಬಿಟ್ಟಿದೆ.
ಬೃಹತ್ ಬೆಂಗಳೂರು ಮಹಾನಗರದ ಹೃದಯಭಾಗದಲ್ಲಿರುವ  ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣಬಿ.ಎಂ.ಶ್ರೀ ಅಚ್ಚುಕೂಟಸುವರ್ಣ ಮಹೋತ್ಸವ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಟ್ಟಡಗಳಿದ್ದು, ಇಲ್ಲಿ ಕನ್ನಡದ ಕೈಂಕರ್ಯ ನಿರಂತರವಾಗಿ ಸಾಗಿದೆ.  ೧೯೪೦ರಲ್ಲಿ ರಜತ ಮಹೋತ್ಸವವನ್ನೂ೧೯೭೩ರಲ್ಲಿ ಸುವರ್ಣ ಮಹೋತ್ಸವವನ್ನೂ,೧೯೭೭ರಲ್ಲಿ ವಜ್ರ ಮಹೋತ್ಸವವನ್ನೂ೧೯೯೧ರಲ್ಲಿ ಅಮೃತ ಮಹೋತ್ಸವವನ್ನೂ ಪರಿಷತ್ತು ಆಚರಿಸಿದೆ.
ಸದಸ್ಯ ಸಂಪತ್ತು: ೧೮ ವರ್ಷ ಮೇಲ್ಪಟ್ಟಕನ್ನಡ ಓದು ಬರಹ ಬಲ್ಲ ಯಾರೇ ಆದರೂ ಪರಿಷತ್ತಿನ ಸದಸ್ಯರಾಗಬಹುದು. ದೇಶವಿದೇಶಗಳಲ್ಲೂ ಸದಸ್ಯರಿದ್ದಾರೆ. ೬೭ ಸಾವಿರದಷ್ಟಿದ್ದ ಸದಸ್ಯತ್ವ ಸಂಖ್ಯೆ, ಈಗ ಸುಮಾರು 1 ಲಕ್ಷ 20 ಸಾವಿರದಷ್ಟಾಗಿದೆ.
ಚುನಾಯಿತ ಸ್ಥಾನಗಳಿಗೆ ಮತ ಚಲಾಯಿಸಲುಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲುಮಾಸಿಕ ಪತ್ರಿಕೆ ಕನ್ನಡ ನುಡಿ ಯನ್ನು ಉಚಿತವಾಗಿ ಪಡೆದುಕೊಳ್ಳಲುಗ್ರಂಥಭಂಡಾರವನ್ನು ಬಳಸಿಕೊಳ್ಳಲು ಸದಸ್ಯರಿಗೆ ಹಕ್ಕು ನೀಡಲಾಗಿದೆ. ಕನ್ನಡಪರ ಸಂಸ್ಥೆಗಳೂ ಪರಿಷತ್ತಿನ ಸದಸ್ಯ ಸಂಸ್ಥೆಗಳಾಗಬಹುದು.
ನಿಯತಕಾಲಿಕೆಗಳುಪ್ರತಿ ತಿಂಗಳೂ ಕನ್ನಡ ನುಡಿ ಮಾಸ ಪತ್ರಿಕೆ ಪ್ರಕಟವಾಗುತ್ತಿದೆ. ಎಲ್ಲಾ ಸದಸ್ಯರಿಗೂ ಇದನ್ನು ಉಚಿತವಾಗಿ ಕಳುಹಿಸಲಾಗುತ್ತಿದೆ. ಪರಿಷತ್ತಿನ ಸುದ್ದಿಗಳುಅಧ್ಯಕ್ಷರ ನುಡಿಜಿಲ್ಲಾ ಘಟಕಗಳ ಸುದ್ದಿಗಳುಹಿರಿಯ ಕವಿಗಳ ಪದ್ಯಸಾದರ ಸ್ವೀಕಾರಪರಿಚಯ ಲೇಖನ ಮುಂತಾದವು ಇದರಲ್ಲಿರುತ್ತವೆ.
ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ತ್ರೈಮಾಸಿಕ ಪತ್ರಿಕೆ. ಕಾವ್ಯಸಂಸ್ಕೃತಿ ಸಂಶೋಧನೆ ಇತ್ಯಾದಿ ವಿಷಯಗಳಲ್ಲಿ ಅಧ್ಯಯನಪೂರ್ಣ ಮೌಲಿಕ ಲೇಖನಗಳಿರುತ್ತವೆ. ಚಂದಾದಾರರಿಗೆ ಕಳುಹಿಸಲಾಗುತ್ತಿದೆ.
ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳು : ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಪರಿಷತ್ತಿನ ಜಿಲ್ಲಾ ಘಟಕಗಳುತಾಲ್ಲೂಕು ಘಟಕಗಳು ಹಾಗೂ ಹೋಬಳಿ ಘಟಕಗಳು ಅಧಿಕೃತವಾಗಿ ಅಸ್ತಿತ್ವದಲ್ಲಿವೆ. ಸಾಹಿತ್ಯಕವಾಗಿಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆ ನಡೆಸುತ್ತಿವೆ. ಸಮ್ಮೇಳನಗೋಷ್ಠಿಸ್ಪರ್ಧೆಉಪನ್ಯಾಸವಸಂತ ಸಾಹಿತ್ಯೋತ್ಸವ,ಸಾಹಿತ್ಯ ರಚನಾ ತರಬೇತಿ ಶಿಬಿರಗಳುಪರಿಷತ್ತಿನ ಸ್ಥಾಪನಾ ದಿನಾಚರಣೆಪ್ರತಿಭಾ ಪುರಸ್ಕಾರರಾಜ್ಯೋತ್ಸವ ಇತ್ಯಾದಿ ಕಾರ್ಯಕ್ರಮಗಳು ಸದಾ ನಡೆಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ನಿವೇಶನಗಳಿವೆ. ಜಿಲ್ಲಾ ಸಾಹಿತ್ಯ ಭವನಗಳು ಅನೇಕ ಕಡೆ ನಿರ್ಮಾಣವಾಗಿವೆ. ಜಿಲ್ಲಾ ಘಟಕಗಳ ವತಿಯಿಂದಲೂ ಪುಸ್ತಕ ಪ್ರಕಟಣೆಯಾಗುತ್ತಿದೆ.
ಗಡಿನಾಡ ಘಟಕಗಳು: ಪರಿಷತ್ತಿನ ಚಟುವಟಿಕೆ ಹೊರರಾಜ್ಯದಲ್ಲಿಯೂ ಹರಡಿದ್ದು ಅಲ್ಲಿ ವ್ಯವಸ್ಥಿತವಾಗಿ ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕೃತ ಗಡಿನಾಡ ಘಟಕಗಳನ್ನು ರಚಿಸಲಾಗಿದೆ. ಮಹಾರಾಷ್ಟ್ರಕೇರಳತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ.
ಗ್ರಂಥಭಂಡಾರ : ಅತ್ಯಂತ ಅಪರೂಪವಾಗಿರುವ ಸುಮಾರು ೬೬ಸಾವಿರಕ್ಕೂ ಹೆಚ್ಚು ಅಮೂಲ್ಯ ಪುಸ್ತಕಗಳನ್ನು ಹೊಂದಿರುವ ಪರಿಷತ್ತಿನ ಸರಸ್ವತೀ ಭಂಡಾರವು ನಾಡಿನ ಹಳೆಯ ಗ್ರಂಥಾಲಯಗಳಲ್ಲಿ ಒಂದು. ಪ್ರತ್ಯೇಕವಾಗಿರುವ ಸಂಶೋಧನಾ ವಿಭಾಗದಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ಪರಾಮರ್ಶನಕ್ಕಾಗಿ ಇರಿಸಿ ಸಾಹಿತ್ಯಾಸಕ್ತರಿಗೆ ಉಚಿತವಾಗಿ ಅನುಕೂಲ ಕಲ್ಪಿಸಲಾಗಿದೆ. ಪ್ರತಿದಿನ ಅನೇಕ ಸಾಹಿತ್ಯಾಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಧ್ವನಿಮುದ್ರಣ ಮತ್ತು ಸಾಕ್ಷ್ಯಚಿತ್ರ ಭಂಡಾರವಸ್ತು ಸಂಗ್ರಹಾಲಯ : ಸಾಹಿತ್ಯ ಲೋಕದ ಗಣ್ಯರ ಅಮೂಲ್ಯ ಭಾಷಣಗಳುಕಲಾವಿದರ ಹಾಡುಗಳನ್ನು ಒಳಗೊಂಡ ಧ್ವನಿಮುದ್ರಣ ಭಂಡಾರ ಮತ್ತು ಪರಿಷತ್ತಿನ ಮತ್ತು ಕನ್ನಡ ಸಾಹಿತಿಗಳ ಹಾಗೂ ಜನಪದ ಕಲೆಗಳ ಪರಿಚಯ ನೀಡುವ ಸಾಕ್ಷ್ಯಚಿತ್ರ ಭಂಡಾರ ಪರಿಷತ್ತಿನ ಅಮೂಲ್ಯ ಆಸ್ತಿಯಾಗಿದೆ. ಅಪರೂಪ ವಾದಂತಹ ನಾಣ್ಯಗಳುಕೈಬರಹಗಳುತಾಮ್ರ ಫಲಕಗಳುಜಾನಪದ ವಸ್ತುಗಳುವಿಗ್ರಹಗಳು ಮೊದಲಾದವುಗಳ ನ್ನೊಳಗೊಂಡ ವಸ್ತುಸಂಗ್ರಹಾಲಯ ಪರಿಷತ್ತಿನಲ್ಲಿದ್ದು ವಿದ್ಯಾರ್ಥಿಗಳ ಮತ್ತು ಸಂಶೋಧಕರ ಭೇಟಿಯ ತಾಣವಾಗಿದೆ.
ಪುಸ್ತಕ ಮಾರಾಟ ಮಳಿಗೆ/ಪುಸ್ತಕ ಸಂತೆ: ಪರಿಷತ್ತಿನಲ್ಲಿ ಪುಸ್ತಕ ಮಾರಾಟ ಮಳಿಗೆಯಲ್ಲಿ ಪರಿಷತ್ತು ಪ್ರಕಟಿಸುವ ಎಲ್ಲ ಪುಸ್ತಕಗಳು ಸೂಕ್ತ ರಿಯಾಯಿತಿ ದರದಲ್ಲಿ ದೊರೆಯುವಂತೆ ಏರ್ಪಾಟು ಮಾಡಲಾಗಿದೆ. ಇದಲ್ಲದೆ ಸಮ್ಮೇಳನಗಳ ಸಂದರ್ಭದಲ್ಲಿ ಇತರೆ ಲೇಖಕ ಪ್ರಕಾಶಕರ ಪುಸ್ತಕಗಳ ಮಾರಾಟಕ್ಕೆ ಪರಿಷತ್ತು ನೆರವಾಗುತ್ತದೆ.
೨೦೦೪ ನವೆಂಬರ್ ನಿಂದ ಲೇಖಕ ಪ್ರಕಾಶಕರ ಉತ್ತೇಜನಕ್ಕಾಗಿ ಪರಿಷತ್ತು  ಪುಸ್ತಕ ಸಂತೆಯೆಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ನಾಡಿನ ಪುಸ್ತಕ ಮಾರಾಟಗಾರರಿಗೆ ಉಚಿತವಾಗಿ ಪರಿಷತ್ತಿನ ಆವರಣದಲ್ಲಿ ಸ್ಥಳಾವಕಾಶ ನೀಡಿ ಕನ್ನಡ ಪುಸ್ತಕಗಳ ಮಾರಾಟಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪುಸ್ತಕ ಮಾರಾಟದ ಜೊತೆಯಾಗಿಯೇ ಅಂಗಳದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮವನ್ನುಉಪನ್ಯಾಸವನ್ನು ನಡೆಸಲಾಗುತ್ತಿರುವುದು ಪುಸ್ತಕಸಂತೆಯ ವಿಶೇಷ.
ಸಭಾಂಗಣ: ಪ್ರಾರಂಭದಲ್ಲಿ ಪರಿಷತ್ತನ್ನು ಕಟ್ಟಿ ಬೆಳೆಸಲು ನೆರವಾದ ಮೈಸೂರು ಮಹಾರಾಜ ಶ್ರೀ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣವಿದೆ. ಇಲ್ಲಿ ಸಭೆಸಮಾರಂಭನೃತ್ಯ ನಾಟಕ ಇತ್ಯಾದಿ ಕಾರ್ಯಕ್ರಮಗಳು ಸದಾ ನಡೆಯುತ್ತಿರುತ್ತವೆ.
ಗೌರವ ಸದಸ್ಯತ್ವ : ಕನ್ನಡಕ್ಕಾಗಿ ಗಮನಾರ್ಹ ಸೇವೆ ಸಲ್ಲಿಸಿರುವ ಗಣ್ಯ ಸಾಹಿತಿಗಳಿಗೆ ಪರಿಷತ್ತಿನ ಅತ್ಯುಚ್ಚ ಮನ್ನಣೆಯಾದ ಗೌರವ ಸದಸ್ಯತ್ವವನ್ನು ನೀಡಲಾಗುತ್ತಿದೆ. ಇದು ಫೆಲೋಷಿಪ್ ಮಾದರಿಯದು. ಪುರಸ್ಕೃತರ ಒಂದು ಪ್ರಾತಿನಿಧಿಕ ಕೃತಿಯನ್ನು ಮುದ್ರಿಸಿ ಸುಲಭ ಬೆಲೆಗೆ ಮಾರಲಾಗುತ್ತಿದೆ.
ಪರಿಷತ್ತನ್ನು ಕಟ್ಟಿ ಬೆಳೆಸಿದ ಮಹನೀಯರ ಆಶಯದಂತೆ ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕನ್ನಡದ ಸಾರ್ವಜನಿಕ ವಿದ್ಯಾಪೀಠವಾಗಿ ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸಾಗಲು ಸಮಸ್ತ ಕನ್ನಡಿಗರ ಹಾಗೂ ಕರ್ನಾಟಕ ಸರ್ಕಾರದ ಹೃತ್ಪೂರ್ವಕ ಬೆಂಬಲ ನಿರಂತರವಾಗಿ ದೊರಕುತ್ತಿರುವುದು ಹರ್ಷ ದಾಯಕ ಸಂಗತಿ.
ಕನ್ನಡ ಭಾಷೆಸಾಹಿತ್ಯಕಲೆಸಂಸ್ಕೃತಿಜನಪದ - ಇವುಗಳ ಬೆಳವಣಿಗೆ ಹಾಗೂ ಸಂರಕ್ಷಣೆ ಮತ್ತು ಸಂವರ್ಧನೆಯ ಆಶಯದಿಂದ ದಿನಾಂಕ ೫-೫-೧೯೧೫ರಲ್ಲಿ ಕನ್ನಡಿಗರ ಈ ಹಿರಿಯ ಸಂಸ್ಥೆ ಸ್ಥಾಪನೆ ಆಯಿತು. ಇದಕ್ಕೆ ಕಾರಣಕರ್ತರಾದ ಮಹನೀಯರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯನವರು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿ ಚಿಕ್ಕ ಕೊಠಡಿಯೊಂದರಲ್ಲಿ ಆರಂಭವಾದ ಅಂದಿನ ಕರ್ಣಾಟಕ ಸಾಹಿತ್ಯ ಪರಿಷತ್ತು ಇಂದು ಕನ್ನಡ ಸಾಹಿತ್ಯ ಪರಿಷತ್ತು ಆಗಿದೆ. ಬೆಂಗಳೂರಿನ ಚಾಮರಾಜಪೇಟೆ ಬಡಾವಣೆಯ ಪಂಪ ಮಹಾಕವಿ ರಸ್ತೆಯಲ್ಲಿ ಶ್ರೀ ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ,ಬಿ.ಎಂ.ಶ್ರೀ ಅಚ್ಚುಕೂಟಸುವರ್ಣ ಮಹೋತ್ಸವ ಕಟ್ಟಡ ಹಾಗೂ ವಜ್ರ ಮಹೋತ್ಸವ ಕಟ್ಟಡ ಹೀಗೆ ನಾಲ್ಕು ಕಟ್ಟಡಗಳಲ್ಲಿ ಕನ್ನಡದ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದೆ.